Montek Singh Ahluwaliya: ಮೊಂಟೆಕ್ ಸಿಂಗ್ ಅಹ್ಲೂವಾಲಿಯ

M Document: Bharatada Erugati Belavanigeya Dinagala Kathana ಎಂ ಡಾಕ್ಯುಮೆಂಟ್: ಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ - Shivamogga Aharnishi Prakashana 2023 - 584p. HB 22x14cm.

ಭಾರತದ ಏರುಗತಿ ಬೆಳವಣಿಗೆಯ ದಿನಗಳ ಕಥನ
ಮೊಂಟೆಕ್ ಮೊದಲ ದರ್ಜೆಯ ಆರ್ಥಿಕ ತಜ್ಞರು ಮತ್ತು ಅಸಾಧ್ಯ ಸಾಮರ್ಥ್ಯಗಳಿರುವ ನಾಗರಿಕ ಸೇವಾ ಅಧಿಕಾರಿ. 1990ರಲ್ಲಿ ಅವರು ಬರೆದ ಪ್ರಬಂಧವೊಂದು
ಪಿ.ವಿ. ನರಸಿಂಹರಾವ್‌ ಸರ್ಕಾರವು ಆರಂಭಿಸಿದ ಉದಾರವಾದಿ ಸುಧಾರಣಾ ಕ್ರಮಗಳ ಮೇಲೆ ಅಪಾರ ಪ್ರಭಾವ ಬೀರಿದೆ. ಒಬ್ಬ ಸೃಜನಶೀಲ ಚಿಂತಕರಾಗಿ ಮೊಂಟೆಕ್ ಅವರ ಕೌಶಲಗಳು ಈ ಪುಸ್ತಕದ ಉದ್ದಕ್ಕೂ ಕಾಣಸಿಗುತ್ತವೆ.
-ಡಾ| ಮನ್‌ಮೋಹನ್ ಸಿಂಗ್, ಮಾಜಿ ಪ್ರಧಾನಮಂತ್ರಿಗಳು
ಮೆಲು ಸ್ವಭಾವದ, ಪ್ರಾಮಾಣಿಕ, ವೈಚಾರಿಕ, ಸ್ಪಷ್ಟ ಚಿಂತನೆಗಳಿರುವ, ವಸ್ತುನಿಷ್ಠತೆ ಮತ್ತು ಹಾಸ್ಯಪ್ರಜ್ಞೆ ಮಿಳಿತವಾಗಿರುವ ಈ ಪುಸ್ತಕ ಮುಗಿಸದೇ ಕೆಳಗಿಡುವಂತಹದಲ್ಲ.
- ಎನ್. ಆರ್. ನಾರಾಯಣಮೂರ್ತಿ, ಸ್ಥಾಪಕರು, ಇನ್ಫೋಸಿಸ್
ಆರ್ಥಿಕ ಸುಧಾರಣೆಗಳ ಸಮೀಪನೋಟ: ನಿರ್ಧಾರಗಳ ಹಿಂದಿನ ಚಿಂತನೆಗಳು, ಅದಕ್ಕೆ ಚಾಲಕ ಶಕ್ತಿಯಾಗಿದ್ದ ವ್ಯಕ್ತಿಗಳು, ಅನುಷ್ಠಾನದ ವೇಳೆ ಎದುರಿಸಿದ ರಾಜಕೀಯ ಮತ್ತು ಆಡಳಿತಶಾಹಿಯ ಸವಾಲುಗಳು. ಈ ಅಧಿಕಾರಯುತ ಕಥನವು ಭಾರತ ಕಂಡ ಮಹತ್ವದ ಆರ್ಥಿಕ ಸುಧಾರಕರೊಬ್ಬರ ಹಾಸ್ಯಪ್ರಜ್ಞೆ ಮತ್ತು ಚಿಂತನೆಗಳ ಅಡಕ. ಭಾರತದ ಅಭಿವೃದ್ಧಿಯಲ್ಲಿ ಆರ್ಥಿಕ-ರಾಜಕೀಯ ಪಾತ್ರಗಳ ಬಗ್ಗೆ ಆಸಕ್ತರಿಗೆ ಅಮೂಲ್ಯ ಮಾತ್ರವಲ್ಲದೇ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಒಳಗಡೆ ಕೆಲಸ ಮಾಡುವುದು ಹೇಗೆಂಬ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ.
- ರಘುರಾಂ ರಾಜನ್, RBI ಮಾಜಿ ಗವರ್ನರ್



ಪುಸ್ತಕದಲ್ಲಿ ನಾಲ್ಕು ಭಾಗಗಳಿವೆ:
ಮೊದಲ ಭಾಗ ಮೊಂಟೆಕ್ ಅವರ ಬದುಕಿನ ಆರಂಭಿಕ ದಿನಗಳ ಆತ್ಮಕಥೆಯಂತಿದೆ.
ಎರಡನೇ ಭಾಗ 1980-1991ರ ತನಕದ ನಡುವಿನ ಅವಧಿಯಲ್ಲಿ ಆರ್ಥಿಕ ಉದಾರೀಕರಣದ ಚಿಂತನೆಗಳಿಗೆ ಕಾರಣವಾದ ರಾಜಕೀಯ-ಆರ್ಥಿಕ-ಸಾಮಾಜಿಕ-ಜಾಗತಿಕ ಬಿಕ್ಕಟ್ಟುಗಳ ಸನ್ನಿವೇಶಗಳನ್ನು ವಿವರಿಸುತ್ತದೆ.
ಮೂರನೇ ಭಾಗದಲ್ಲಿ, 1991ರ ಬಳಿಕದ ಆರ್ಥಿಕ ಸುಧಾರಣೆಗಳ ಆರಂಭದ ದಿನಗಳನ್ನು ವಿವರಿಸಲಾಗಿದೆ.
ಭಾಗ4ರಲ್ಲಿ ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ಅವಧಿಯನ್ನು ಇಂಚಿಂಚಾಗಿ ಬಿಚ್ಚಿಡಲಾಗಿದೆ.
ಇದಲ್ಲದೇ ಉಪಸಂಹಾರದಲ್ಲಿ ತೀರಾ ಇತ್ತೀಚೆಗಿನ ನೋಟು ರದ್ಧತಿ, GST ಮತ್ತಿತರ ಸಂಗತಿಗಳನ್ನೂ ಅವರು ಚರ್ಚಿಸಿದ್ದಾರೆ.



9789384501631


Arthika Abhivraddhi: ಆರ್ಥಿಕ ಅಭಿವೃದ್ಧಿ
BACKSTAGE: THE STORY BEHIND INDIA’S HIGH GROWTH YEARS

338.954K / AHLM

Powered by Koha